ಸೋಮವಾರ, ಡಿಸೆಂಬರ್ 5, 2011

ಸ್ವಗತ - ವಿನಿಗವನ

ನೀರಿಲ್ಲದೆ ಬೇರುಗಳಿಗೆ ಬಾಡಿಹೋದ ಹಾಗೆ ಲತೆ
ಭಾವನೆಗಳು ಬತ್ತಿ ಹೋಗಿ ಕವಿಗೆ ಒಲಿಯಲಿಲ್ಲ ಕವಿತೆ

ಹರುಷ ಸರಸ ಭಾವ ನೂರು ಉಕ್ಕುತಿದ್ದ ಕಾಲದಲ್ಲಿ
ರಸಕಾವ್ಯವು ಹೊಮ್ಮುತಿತ್ತು ಪ್ರೀತಿಯ ಪಿಸುಮಾತಿನಲ್ಲಿ

ಮಿಂಚಿ ಹೋದ ಕನಸಿಗಾಗಿ ಅತ್ತು ಕರೆಯಲೇಕೆ ಮನಸು
ಸಿಗಲಾರದೆ ಇರದು ಸ್ಫೂರ್ತಿ ಹುಡುಕಾಟವ ಮುಂದುವರೆಸು