ನೀರಿಲ್ಲದೆ ಬೇರುಗಳಿಗೆ ಬಾಡಿಹೋದ ಹಾಗೆ ಲತೆ
ಭಾವನೆಗಳು ಬತ್ತಿ ಹೋಗಿ ಕವಿಗೆ ಒಲಿಯಲಿಲ್ಲ ಕವಿತೆ
ಹರುಷ ಸರಸ ಭಾವ ನೂರು ಉಕ್ಕುತಿದ್ದ ಕಾಲದಲ್ಲಿ
ರಸಕಾವ್ಯವು ಹೊಮ್ಮುತಿತ್ತು ಪ್ರೀತಿಯ ಪಿಸುಮಾತಿನಲ್ಲಿ
ಮಿಂಚಿ ಹೋದ ಕನಸಿಗಾಗಿ ಅತ್ತು ಕರೆಯಲೇಕೆ ಮನಸು
ಸಿಗಲಾರದೆ ಇರದು ಸ್ಫೂರ್ತಿ ಹುಡುಕಾಟವ ಮುಂದುವರೆಸು
ಯಾರು ಇಲ್ಲದ ಜಾಗದಲ್ಲಿ ಬಂದಿಯಾದೆ ಅಂದು...
ಪ್ರತ್ಯುತ್ತರಅಳಿಸಿಬರಡಾದ ನನ್ನ ಜೀವಕ್ಕೆ ಸೆಲೆಯಂತೆ ನಿಂದು...
ಸುಖಿಯಾಗಿದ್ದೆ ನಾನು..ನೋವಿಗೆಕಾರಣವಿಲ್ಲವೆಂದು..
ಎಂದು ಮರೆಯಾದೆಯೋ ಕಾಣೆ, ಜೊತೆಗಿಲ್ಲ ನೀ ನಿಂದು...
ನೆನಪುಗಳೆನೋ ಹಾಗೆ ಇವೇ ಅಚ್ಚಳಿಯದೆ....
ಕಾಡುತಿವೆ ಪ್ರತಿಗಳಿಗೆ,ನೋವಿಗೆ ಸ್ಪೂರ್ತಿಯಾಗಿ..
ಕನಸುಗಳೇನೊ ನೂರಾರಿವೆ, ಸೂತ್ರವಿಲ್ಲದ ಬೊಂಬೆಗಳಾಗಿ...